ಶನಿವಾರ ನಡೆದ ರಾಜ್ಯಮಟ್ಟದ ವೆಬಿನಾರ್‌ ನಲ್ಲಿ ಕನಾ೯ಟಕ ರಾಜ್ಯ ಹರಳಯ್ಯ ಸಮಗಾರ ಸಂಘದ ಉಪಾಧ್ಯಕ್ಷರಾದ ಪರಶುರಾಮ ಅರಕೇರಿ ಮಾತನಾಡಿದರು.

ಹುಬ್ಬಳ್ಳಿ: ರಾಜಕೀಯ ಇಚ್ಛಾಶಕ್ತಿಯ ಅಭಾವ, ಹಿರಿಯರನ್ನು ತಿರಸ್ಕಾರದಿಂದ ನೋಡುವ ಸ್ವಭಾವ, ಹಾಗೂ ಒಗ್ಗಟಿನ ಕೊರತೆ ಸಮಗಾರ ಸಮುದಾಯ ಆಥಿ೯ಕವಾಗಿ ಹಾಗೂ ರಾಜಕೀಯವಾಗಿ ಹಿಂದೆ ಬೀಳಲು ಮುಖ್ಯ ಕಾರಣ ಎಂದು ಸಮಗಾರ ಸಮುದಾಯದ ಗಣ್ಯರು ಅಭಿಪ್ರಾಯಪಟ್ಟರು.

ಶನಿವಾರ ಇಂದಿಲ್ಲಿ ನಡೆದ ರಾಜ್ಯಮಟ್ಟದ ವೆಬಿನಾರ್‌ ನಲ್ಲಿ ಮಾತನಾಡಿದ ಅವರು, ಸಮಗಾರರು ಒಂದಾದರೆ ಅವರ ಪ್ರಗತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಅವರು ಒಗ್ಗಟ್ಟಾಗಲು ಸಾಮೂಹಿಕವಾಗಿ ಪ್ರಾಮಾಣಿಕ ಪ್ರಯತ್ನ ಮಾಡದಿರುವದೇ ಒಂದು ಸಮಸ್ಯೆಯಾಗಿದೆ ಎಂದು ಅವರು ನುಡಿದರು.

ಆರಂಭದಲ್ಲಿ ಹೈದಾರಾಬಾದ್ ನಿಂದ ಮಾತನಾಡಿದ,‌ ನಿವೃತ್ತ ಬಾಂಕ್‌ ಅಧಿಕಾರಿ ವೈ ಎ ದೊಡಮನಿ, ಇಂದಿನ ಯುವ ಪೀಳಿಗೆ ಹಿರಿಯರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಿರಿಯರು ಸಮಾಜಕ್ಕಾಗಿ ಹಿಂದೆ ಮಾಡಿದ ಕೆಲಸಗಳನ್ನು ಪರಿಗಣಿಸಿ, ಅವರನ್ನು ಗೌರವಿಸಬೇಕು. ಅವರ ಮಾಗ೯ದಶ೯ನ ತೆಗೆದುಕೊಂಡು ಸಮಾಜದ ಹಕ್ಕುಗಳಿಗೆ ಹೋರಾಡಲು ಮುನ್ನುಗ್ಗಿದರೆ ಖಂಡಿತ ಯಶಸ್ಸು ಸಾಧ್ಯ ಎಂದರು.

ವಿಜಾಪೂರ ಮತ್ತಿತರ ಜಿಲ್ಲೆಗಳಲ್ಲಿ ಹರಳಯ್ಯನ ಹೊಂಡ ಸೇರಿದಂತೆ ನಮ್ಮ ಅಮೂಲ್ಯ ಆಸ್ತಿಗಳಿವೆ. ಅವುಗಳನ್ನು ತುತಾ೯ಗಿ ಸಂರಕ್ಷಿಸಬೇಕಾಗಿದೆ ಎಂದರು.

ಶಶಿಕುಮಾರ ಕಿತ್ತೂರ ಸ್ಮರಣೆ

ಕೆಲವು ವಷ೯ಗಳ ಹಿಂದೆ ಬೆಳಗಾವಿಯಲ್ಲಿ ಸಮಗಾರರ ಬೃಹತ್‌ ಸಮಾವೇಶ ನಡೆಸಿ ನಮ್ಮ ಸಮಾಜದ ಒಗ್ಗಟ್ಟಿಗೆ ಭರವಸೆ ಮೂಡಿಸಿದ ಶಶಿಕುಮಾರ ಕಿತ್ತೂರ ಅವರನ್ನು ಸ್ಮರಿಸಿದ ಧಾರವಾಡದ ನಿವೃತ್ತ ಶಿಕ್ಷಣಾಧಿಕಾರಿ ಶಾಂತೇಶ ಗಾಮನಗಟ್ಟಿ, ನಮ್ಮಲ್ಲಿನ ರಾಜಕೀಯ ಇಚ್ಛಾಶಕ್ತಿಯ ಕೊರತೆ ನಮಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ನಮ್ಮ ಅಸ್ಮಿತೆಯ ಅರಿವು ನಮಗಾಗಬೇಕಾಗಿದೆ. ಇತರ ದಲಿತರನ್ನು ಮೀರಿ ನಾವು ಬೇಳೆಯಬೇಕಾದ ಅಗತ್ಯ ಇಂದು ಹಿಂದೆಂದಿಗಿಂತ ಹೆಚ್ಚಾಗಿದೆ. ನಮ್ಮ ಸಂಘಟನೆಗೆ ಬೆಂಗಳೂರಿನಲ್ಲಿ ನೆಲೆಸಿರುವ ನಮ್ಮ ಸಮುದಾಯದವರ ಸಹಕಾರ ಬೇಕಿದೆ. ಗುರುಪೀಠ ಹಾಗೂ ಶಿಕ್ಷಣ ಸಂಸ್ಥೆಗಳು ನಮ್ಮ ಸದ್ಯದ ತುತು೯ ಎಂದು ತಿಳಿಸಿದರು.

ಸರಕಾರ ನಮ್ಮನ್ನೂ ಇಗಲೂ ಪರಿಗಣಿಸದೇ ಇರುವುದಕ್ಕೆ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಕಾರಣ ಎಂದು ವಾದಿಸಿದ ಕನಾ೯ಟಕ ರಾಜ್ಯ ಹರಳಯ್ಯ ಸಮಗಾರ ಸಂಘದ ಉಪಾಧ್ಯಕ್ಷರಾದ ಪರಶುರಾಮ ಅರಕೇರಿ, ನಮ್ಮಲ್ಲಿನ ಎಲ್ಲ ಸಣ್ಣತನಗಳನ್ನು ಮೀರಿ ನಾವು ಒಂದಾದರೆ ನಮ್ಮನ್ನ ಸರಿಗಟ್ಟುವವರೇ ಯಾರಿಲ್ಲ ಎಂದರು.

ಸ್ಪಷ್ಟತೆ ಇಲ್ಲ

ಕೆರೂರಿನಿಂದ ಮಾತನಾಡಿದ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾಯದಶಿ೯ ವೈ ಸಿ ಕಾಂಬಳೆ, ನಮ್ಮ ಸಮುದಾಯದ ಜನರಲ್ಲಿ ಸಾಕಷ್ಟು ವಿಶಯಗಳ ಬಗೆಗೆ ಇನ್ನೂ ಸ್ಪಷ್ಟತೆ ಯಲ್ಲ. ಬೇರೆ ದಲಿತರ ಬಗೆಗೆ ನಾವೇಕೆ ಬೆಳೆಯಲು ಸಾಧ್ಯವಾಗಿಲ್ಲ ಎಂದು ಚಿಂತಿಸಬೇಕು. ರಾಜಕೀಯ, ಆಥಿ೯ಕ ಸೌಲಭ್ಯಗಳನ್ನು ಪಡೆದುಕೊಳ್ಳಲು ನಾವು ಬೇರೆ ಜಾತಿಯ ದಲಿತರ, ಇತರ ಸಂಘಟನೆಗಳ ಉಪಯೋಗ ಪಡೆದುಕೊಳ್ಳಬೇಕು. ನಮ್ಮಲ್ಲಿ ಯಾರಿಗಾದುರೂ ರಾಜಕೀಯ ಸ್ಥಾನಮಾನಗಳು ಸಿಗುವುದಾದರೆ ಪಕ್ಷಾತೀತವಾಗಿ ಎಲ್ಲರೂ ಅವರನ್ನು ಬೆಂಬಲಿಸಬೇಕು. ಇಂದು ಸ್ಫಧೆ೯ ಇಲ್ಲದೆ ಏನೂ ಸಿಗುವುದಿಲ್ಲ. ಮನೆ ಬಿಟ್ಟು ಹೊರಬನ್ನಿ, ವಿಧಾನಸೌಧ ಸುತ್ತಿ. ಯಶಸ್ವಿ ರಾಜಕಾರಿಣಿಯಾಗದಿದ್ದರೆ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಬುದ್ಧಿಜೀವಿಗಳ ಒಂದಾಗಿ ನಮ್ಮ ನಾಯಕರಿಗೆ ಮಾಗ೯ದಶ೯ನ ಮಾಡಲು ಅವರು ಸಲೆಹೆ ನೀಡಿದರು.

ಚಮ೯ಕಾರರ ಉದ್ಧಾರಕ್ಕಾಗಿಯೇ ಸ್ಥಾಪಿತವಾದ ಲೀಡ್ಕರ್‌ ನಿಗಮ್ಮಕ್ಕೆ ದಶಕಗಳನಂತರವೂ ಸಮಗಾರರನ್ನು ಚೇರಮನ್ ರನ್ನಾಗಿ ನೇಮಕ ಮಾಡಿದಿರುವುದು ಒಂದು ದುರಂತವೇ ಸರಿ ಎಂದ ಊದ್ಯಮಿ, ಸಮಾಜ ಸೇವಕರಾದ ಮುಧೋಳದ ಬಸವರಾಜ ಮಾನೆ, ಇದರ (ಲೀಡ್ಕರ್)‌ ಕುರಿತು ನಮ್ಮವರು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದರು. ರಾಜಕೀಯ ದೌಬಲ್ಯ ನಮ್ಮ ಮುಖ್ಯ ಕೊರತೆ. ಇದನ್ನು ಹೇಗೆ ನೀಗಿಸಬೇಕು ಎಂಬುವುದನ್ನು ನಾವು ಒಟ್ಟಾಗಿ ಕುಳಿತು ಚಿಂತಿಸುವ ಕಾಲ ಇದು. ಅದು ತುತಾ೯ಗಿ ಆಗಲೇಬೇಕಾದ ಕೆಲಸ ಎಂದರು.

ತಳಮಟ್ಟದ ಒಗ್ಗಟ್ಟು ಆಗಬೇಕು

ನಮ್ಮ ಸಮಾಜದ ಸಂಘಟನೆ ತಳಮಟ್ಟದಲ್ಲಿ ಆಗಬೇಕಾದ ಅಗತ್ಯತೆ ಕುರಿತು ಒತ್ತಿ ಹೇಳಿದ ವಿಜಾಪುರದ ದೇವೇಂದ್ರ ಕಬಾಡೆ, ಹಳ್ಳಿಯಲ್ಲಿನ ನಮ್ಮ ಸಮಾಜದ ಸದಸ್ಯರು ಉದ್ಧಾರವಾದರೆ, ಅದು ತಾಲೂಕು, ಜಿಲ್ಲಾಮಟ್ಟದಲ್ಲಿ ಪ್ರತಿಧ್ವನಿಸಿ ರಾಜ್ಯಮಟ್ಟದಲ್ಲಿ ಅನುರಣಿಸಲಿದೆ ಎಂದರು. ನಮ್ಮ ಸಮಾಜದ ಅಧೀಕಾರಿಗಳಿಂದ ನಮ್ಮ ಸಮಾಜದ ಬಡವರಿಗೆ ಎನೂ ಸಹಾಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ತಮ್ಮ ಕುಂಟುಂಬದ ಉದ್ದಾರಕ್ಕೆ ಮಾತ್ರ ತಮ್ಮ ಅಧಿಕಾರವನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಈ ಸಮಾಜದಲ್ಲಿ ಹುಟ್ಟಿ, ಮೀಸಲಾತಿ, ಸರಕಾರದ ಸೌಲಭ್ಯಗಳನ್ನು ಪಡೆದಿದ್ದಕ್ಕಾದರೂ ಸಮಾಜದ ಋಣ ಅವರು ತೀರಿಸಬೇಕು. ಅದನ್ನು ಅವರು ತೀರಿಸಲೇಬೇಕು ಎಂದರು.

ಹುಬ್ಬಳ್ಳಿಯಿಂದ ರಾಜು ವಿಜಾಪೂರ ಈ ಚಚಾ೯ಗೋಷ್ಠಿಯನ್ನು ನಿರೂಪಿಸಿದರು.

Comments

  1. Yes sir, whatever given above ideas are quite nice, but my sincere view is that why not we recognize the 3-4 brilliant student from each taluka and those parents are very poor we must help them and support them to come up educationally,then only our society will come up.

  2. Good work my dear brother, if all we join for good cause to up lift poor and need people at right time we can build healthy community and strong nation.
    Jai Hind…Jai Bheem. ..

  3. ಸಮಾಜದ ಮುಖಂಡರು ಒಳ್ಳೆಯ ವಿಚಾರ್ ತಿಳಿಸಿದ್ದೀರಿ ನಮ್ಮ ಸಮಾಜದವರ ಬೆಳವಣಿಗೆಗೆ ನಮ್ಮ ಸಹಕಾರ ಯಾವತ್ತೂ ಇರುತ್ತದೆ.

  4. Super but we have struggle more,First we have to approach all our people .Any one not says I am the hero .and also we support well know about our caste.who care our people and also work for our persons.Definitely we all support that such good work.

Leave a Reply

Your email address will not be published. Required fields are marked *