ಸೇವೆಯಿಂದ ನಿವೃತ್ತಿ ಹೊಂದಿದ ಶಿಕ್ಷಕಿ ಶ್ರಿಮತಿ ಶಿವಗಂಗಮ್ಮ ಹಾಗೂ ಅವರ ಪತಿ ನಿವೃತ್ತ ಪಿ.ಎಸ್.ಐ ಚನ್ನಬಸವ ಬಿ. ಕಬಾಡೆ ಅವರಿಗೆ ಕಂದಗನೂರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಗುರುವಾರ ಹೃದಯಸ್ಪರ್ಷಿ ಬಿಳ್ಕೊಡುಗೆ ಸಮರಂಭದಲ್ಲಿ ಸನ್ಮಾನಿಸಲಾಯಿತು. ಹಿರಿಯರಾದ ಶಿವನಗೌಡ ಬಿರಾದಾರ, ಮುಖ್ಯಗುರುಗಳಾದ ಎ. ಮುಲ್ಲಾ, ಹಾಗೂ ಇತರರನ್ನು ಚಿತ್ರದಲ್ಲಿ ಕಾಣಬಹುದು.

ಮುದ್ದೇಬಿಹಾಳ: ತಾಲ್ಲೂಕಿನ ಕಂದಗನೂರ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕಳೆದ ಐದು ವರ್ಷಗಳಿಂದ ಸೇವೆಸಲ್ಲಿಸಿದ ಶ್ರಿಮತಿ ಶಿವಗಂಗಮ್ಮ ಪ್ರಧಾನೆಪ್ಪ ವಿಜಾಪೂರ ಇದೇ ಡಿಶೆಂಬರ್ 31ರಂದು (ಗುರುವಾರ) ಸೇವೆಯಿಂದ ನಿವೃತ್ತಿ ಹೊಂದಿದರು. ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸುಧೀರ್ಘ 36 ವರ್ಷ ಸೇವೆ ಸಲ್ಲಿಸಿದ ಹಿರಿಮೆ ಅವರದು.

ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಮಸ್ಥರು, ಹಿರಿಯರು, ಗ್ರಾಮಪಂಚಾಯತಿ ಸದಸ್ಯರು ಶ್ರಿಮತಿ ಶಿವಗಂಗಮ್ಮ ಹಾಗೂ ಅವರ ಪತಿ ನಿವೃತ್ತ ಪಿ.ಎಸ್.ಐ ಚನ್ನಬಸವ ಬಿ. ಕಬಾಡೆ ಅವರಿಗೆ ಹೃದಯಸ್ಪರ್ಷಿ ಬಿಳ್ಕೊಡುಗೆ ಸಮರಂಭವೊಂದನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಊರಿನ ಹಿರಿಯರಾದ ಶ್ರಿ ಶಿವನಗೌಡ ಬಿರಾದಾರ, ಶಿಕ್ಷಕ ವೃತ್ತಿ ಪವಿತ್ರವಾದ್ದು. ಅಂತಹ ವೃತ್ತಿಯನ್ನು ಆಯ್ದುಕೊಂಡು ತನು, ಮನ, ಧನದಿಂದ ತಮ್ಮನ್ನು ತಾವು ಮಕ್ಕಳ ಉದ್ದಾರಕ್ಕೆ ಸಮರ್ಪಿಸಿಕೊಂಡವರು ಶ್ರಿಮತಿ ಶಿವಗಂಗಮ್ಮನವರು. ಅವರು ತಮ್ಮ ವೃತ್ತಿಯ ಬಗೆಗೆ ಇಟ್ಟುಕೊಂಡ ಕಾಳಜಿ, ಗೌರವ ಇತರರಿಗೆ ಮಾದರಿ ಎಂದರು.

ಅವರ ನೆಮ್ಮದಿಯ ನಿವೃತ್ತಿ ಬದುಕಿಗೆ ಹಾರೈಸಿದ ಬಿರಾದಾರ, ಶ್ರಿಮತಿ ಶಿವಗಂಗಮ್ಮನವರ ಕೈಯಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿ ಸಾರ್ಥಕ ಬದುಕನ್ನು ಕಟ್ಟಿಕೊಂಡಿದ್ಧಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಮುಖ್ಯಗುರುಗಳಾದ ಎ. ಮುಲ್ಲಾ, ಶಿವಗಂಗಮ್ಮನವರು ತಮ್ಮ ವೃತ್ತಿಯುದ್ದಕ್ಕೂ ಸಹಪಾಠಿ ಶಿಕ್ಷಕರ ಜೊತೆ ಸೌಹಾರ್ಧಯುತ, ಸ್ನೆಹಪರವಾಗಿ ನಡೆದುಕೊಂಡವರು. ತಮ್ಮ ಹಸನ್ಮುಖ ಹಾಗೂ ಕ್ರಿಯಾಶಿಲ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.

ಕ್ರೀಯಾಶೀಲ ವ್ಯಕ್ತಿತ್ವ

ಶ್ರಿಮತಿ ಶಿವಗಂಗಮ್ಮನವರದು ಪಾದರಸದಂತಹ ಕ್ರೀಯಾಶೀಲ ವ್ಯಕ್ತಿತ್ವ. ಅವರು ಎಲ್ಲಿಯೇ ಇರಲಿ, ತಮ್ಮ ಮಾತು, ನಗುವಿನ ಮೂಲಕ ಅಲ್ಲಿನ ವಾತವರಣಕ್ಕೆ ಜೀವ ತುಂಬುತ್ತಾರೆ.

ತಾಳಿಕೋಟೆಯ ಶ್ರೀ ಪ್ರಧಾನೆಪ್ಪ ಹಾಗೂ ಶ್ರೀಮತಿ ಎಲ್ಲವ್ವ ದಂಪತಿಗಳಿಗೆ ಜನಿಸಿದ ಶಿವಗಂಗಮ್ಮ ಅವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಾಳಿಕೋಟಿಯಲ್ಲಿ, ನಂತರ ಶಿಕ್ಷಕರ ತರಬೇತಿಯನ್ನು ಮುದ್ದೇಬಿಹಾಳದಲ್ಲಿ ಪೂರೈಸಿದರು.

1984ರಲ್ಲಿ ಶಿಕ್ಷಣ ಇಲಾಖೆ ಸೇರಿ, ತಮದಡ್ಡಿಯಲ್ಲಿ ಸೇವೆ ಆರಂಭಿಸಿದ ಅವರು, ನಂತರ ಮೂಖಿಹಾಳ, ಮುದ್ದೇಬಿಹಾಳ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದರು.

ಅವರು ಬಡತನದಲ್ಲಿ ಬೆಳೆದರಾದರೂ ಅವರ ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಶಿಕ್ಷಣ, ಹಾಗೂ ಉತ್ತಮ ಸಂಸ್ಕಾರ ಕೊಡಿಸುವಲ್ಲಿ ಏನೂ ಕೊರತೆ ಮಾಡಲಿಲ್ಲ. ಶ್ರಮಜೀವಿಗಳಾಗಿದ್ದ ಪ್ರಧಾನೆಪ್ಪ ಹಾಗೂ ಎಲ್ಲವ್ವ ತಮ್ಮ ಮಕ್ಕಳನ್ನು ಎಲ್ಲರೂ ಮೆಚ್ಚುವಂತೆ ಬೆಳೆಸಿದರು. ಬಹುಃಶ ಆ ಸಂಸ್ಕಾರದಿಂದಲೇ ಶಿವಗಂಗಮ್ಮ ತಮ್ಮ ವೃತ್ತಿ ಜೀವನದುದ್ದಕ್ಕೂ ಮೌಲ್ಯಗಳ ಜೊತೆ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ.

ಶ್ರಿಮತಿ ಶಿವಗಂಗಮ್ಮನವರ ಎಲ್ಲ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಪ್ರೊತ್ಸಾಹಿಸಿದವರು ಅವರ ಪತಿ ಶ್ರೀ ಚನ್ನಬಸವ ಕಬಾಡೆ, ಹಾಗೂ ಅವರ ಮಕ್ಕಳು. ಅವರು ಪತಿ ಚನ್ನಬಸವನವರು ಪೋಲಿಸ ಇಲಾಖೆಯಲ್ಲಿದ್ದರೂ ಒಮ್ಮೆಯೂ ದುಶ್ಚಟಗಳಿಗೆ ಮನಸ್ಸು ಮಾಡಲಿಲ್ಲ; ತಮ್ಮ ಹೆಸರು ಕೆಡಿಸಿಕೊಳ್ಳಲಿಲ್ಲ. ಹೆಸರಿಗೆ ತಕ್ಕಂತೆ, ಚನ್ನಬಸವ ಶರಣರ ಬದುಕು ಅವರದು.

ಇವರಿಗೆ ಸಾತ್ವಿಕ ಹಾದಿಯಲ್ಲಿ ನಡೆಯಲು ನಿರಂತರ ಸ್ಫೂರ್ತಿ, ಆಶಿರ್ವಾದ ಮಾಡಿದವರು ಜೀರಲಬಾವಿ ಮಠದ ಅಜ್ಜನವರು. ದಶಕಗಳಿಂದ ಈ ಮಠಕ್ಕೆ ನಡೆದುಕೊಳ್ಳುತ್ತಿರುವ ಶಿವಗಂಗಮ್ಮ ನವರ ಕುಟುಂಬ ಶರಣರ ಸಾರ್ಥಕ ಬದುಕನ್ನು ನಡೆಸುತ್ತಿದೆ.

ಶ್ರೀ ಚನ್ನಬಸವ ಹಾಗೂ ಶ್ರಿಮತಿ ಶಿವಗಂಗಮ್ಮ ದಂಪತಿಗಳಿಗೆ ಮೂವರು ಪುತ್ರರು– ಮಂಜುನಾಥ, ಗಂಗಾಧರ, ನಿತ್ಯಾನಂದ ಹಾಗೂ ಓರ್ವ ಪುತ್ರಿ– ಜ್ಯೋತಿ. ಅವರೂ ತಮ್ಮ ತಂದೆ-ತಾಯಿಗಳಂತೆ ಮೌಲ್ಯಯುತ ಬದುಕನ್ನು ಬದುಕಿ, ಸಮಾಜದಲ್ಲಿ ಹೆಸರು ಗಳಿಸಿದ್ದಾರೆ. ಮಂಜುನಾಥ ಶಿಕ್ಷಕರಾಗಿದ್ದರೆ, ಗಂಗಾಧರ ಭಾರತೀಯ ಸೈನ್ಯದಲ್ಲಿ ಧೀರ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿತ್ಯಾನಂದ ಕೇಂದ್ರ ಸರಕಾರದ ಮಂಗಳೂರು ಪೆಟ್ರೋಕೆಮಿಕಲ್ಸ್ ರಿಫೈನರಿ ನಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶ್ರೀಮತಿ ಶಿವಗಂಗಮ್ಮ ಹಾಗು ಚನ್ನಬಸವನವರ ನಿವೃತ್ತಿ ಬದುಕು ಶಾಂತಿ, ನೆಮ್ಮದಿ, ಹಾಗು ಸಂತಸದಿಂದ ಕೂಡಿರಲಿ. ಅವರಿಗೆ ದೇವರು ಆಯುರಾರೋಗ್ಯ ನೀಡಿ ಹರಸಲಿ ಎನ್ನುವುದೇ ಎಲ್ಲರ ಹಾರೈಕೆ.

Comments

  1. ಶ್ರೀಮತಿ.ಶಿವಗಂಗಮ್ಮ.ಪ್ರಧಾನೆಪ್ಪಾ.ವಿಜಾಪೂರ.ಶಿಕ್ಷಕಿ ವಯೋನಿವೃತಿಯ ತರುವಾಯ ಜೀವನ ಸುಂದರ ಮತ್ತು ಆದರ್ಶಪ್ರಾಯವಾಗಿ ಶ್ರೀಶ್ರೀಶ್ರೀ ಶಿವಶರಣ ಹರಳ್ಳಯ್ಯ ಕುಲಕ್ಕೆ ಮಾರ್ಗದರ್ಶನವಾಗಲಿ.ಸೃಷ್ಟಿಕರ್ತನು ಇವರ ಪರಿವಾರಕ್ಕೆ ಆಯು ಅರೋಗ್ಯ ಕರುಣಿ ಬದುಕು ಸದಾ ಹಸಿರಾಗಿರಲಿ ಎಂದು ಆಶಿಸುತ್ತವೆ.

Leave a Reply

Your email address will not be published. Required fields are marked *